Note: The article “Prajwal Revanna Case, Sexual Violence & Leaked Videos : Tackling the Continuing Arc of Abuse” by technologist Rohini Lakshané, gathered widespread attention as it dealt with the pernicious issue of viral videos of abusive sexual content and how to curb its harm. Free Speech Collective is grateful to Vikas MK and Arun L for this translation into Kannada.

A translation of the article has been published in Prajavani, the Kannada newspaper of the Deccan Herald group.).

ಮಾಜಿ ಶಾಸಕ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಎಸಗಿರುವ ಆರೋಪದ ಮೇಲೆ ಸೆರೆಮನೆ ಸೇರಿದ್ದಾರೆ.  ಈ ಆರೋಪಕ್ಕೆ ಸಂಬಂಧಿಸಿದ  ಸಾವಿರಾರು ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಳ್ಳುತ್ತಿವೆ. ತಂತ್ರಜ್ಞೆ ರೋಹಿಣಿ ಲಕ್ಷಣೇ ಅವರು ಈ ರೀತಿಯ ವಿಡಿಯೋಗಳು ಎಲ್ಲಂದರೆ ಅಲ್ಲಿ ಹರಡುವುದನ್ನು ಹೇಗೆ ತಡೆಗಟ್ಟಬಹುದು ಅನ್ನುವುದರ ಬಗ್ಗೆ ಬರೆದಿರುತ್ತಾರೆ.

‘ಪೆನ್ ಡ್ರೈವ್ ಕೇಸು ‘ ಎಂದು ಕೆಲ ಮಾಧ್ಯಮದವರು ಈ ಕೇಸಿಗೆ ಹೆಸರಿಟ್ಟಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ಸುಮಾರು ೩೦೦೦ ಕ್ಕೂ ಹೆಚ್ಚು ಲೈಂಗಿಕ ಹಲ್ಲೆಯ ವಿಡಿಯೋಗಳು ಏಪ್ರಿಲ್ ತಿಂಗಳಲ್ಲಿ ಇಂಟರ್ನೆಟ್ ನಲ್ಲಿ , ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು .  ಹಂಚಿಕೆಯ ಮಾಧ್ಯಮ ಪೆನ್ ಡ್ರೈವ್ ಆಗಿರುವುದು ಈ ಹೆಸರಿಗೆ ಕಾರಣ . ಈ ವಿಡಿಯೋಗಳು ತುಂಬಿರುವ ಸುಮಾರು ೨೦೦೦ ಪೆನ್ ಡ್ರೈವ್‍ಗಳನ್ನು ಹಾಸನದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸಾರಿಗೆಗ ವಾಹನಗಳಲ್ಲಿ ಅಪರಿಚಿತರು ಇಟ್ಟುಕೊಂಡಿದ್ದಾರೆ ಎಂಬ ವರಿದಿಗಳು ಬಂದಿವೆ . 

ಎಷ್ಟೋ ವಿಡಿಯೋಗಳಲ್ಲಿ ಲೈಂಗಿಕ ಹಲ್ಲೆಗೆ ಒಳಗಾದವರನ್ನು ಅವರ ಮುಖ ಅಥವಾ ಧ್ವನಿಯಿಂದ ಗುರುತಿಸಲು ಸಾಧ್ಯವಿದೆ. ಮುಖ ಮತ್ತು ಧ್ವನಿಗೆ ಯಾವುದೇ ರೀತಿಯ ಮುಸುಕು ಹಾಕಿಲ್ಲ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ( ವಾಟ್ಸಪ್ಪ್ , ಟೆಲಿಗ್ರಾಂ) ಪೋರ್ನ್ ಸೈಟ್ ಗಳಲ್ಲಿ   ನಿಯಂತ್ರಣವಿಲ್ಲದೆ ಹಂಚಿಕೆಯಾಗುತ್ತಿವೆ .
ಈ (image-based sexual abuse : ಚಿತ್ರಾಧಾರಿತ ಲೈಂಗಿಕ ಕಿರುಕುಳ )(IBSA )  ವಿಡಿಯೋಗಳನ್ನು ಹಂಚಲು ಬಳಕೆಯಾಗುತ್ತಿರುವ ಕೆಲ ವೆಬ್‍ಸೈಟ್‍ಗಳ , ಗ್ರೂಪ್‍ಗಳ ಚಾನೆಲ್‍ಗಳ ಹೆಸರುಗಳನ್ನು ನೈತಿಕ ಹೊರೆ ಹೊತ್ತು ಈ ಲೇಖನದಲ್ಲಿ ಪ್ರಚಾರ ಮಾಡಲಾಗುವುದಿಲ್ಲ

ಈ ವಿಡಿಯೋಗಳನ್ನು ನೋಡಲು ಎಷ್ಟೋ ಜನ ವೆಬ್ಸೈಟ್ ಗಳಲ್ಲಿ ಹಾಗು ಸೋಶಿಯಲ್ ಮೀಡಿಯಾ ಚಾನೆಲ್ ಮತ್ತು ಗ್ರೂಪ್ ಗಳಲ್ಲಿ ಕಾತುರದಿಂದ ಹುಡುಕಿತ್ತಿದ್ದಾರೆ. ಕೆಲವರು ಪುಡಿಗಾಸಿಗೆ ಈ ವಿಡಿಯೋಗಳನ್ನು ವಿತರಿಸುತ್ತಲೂ ಇದ್ದಾರೆ ಎಂಬುದರ ಬಗ್ಗೆ ವರದಿಗಳಿದ್ದಾವೆ. ಇಂತಹ ವಿಡಿಯೋಗಳಲ್ಲಿ ಕಂಡು ಬಂದ ಮಹಿಳೆಯರನ್ನು ಗುರುತಿಸಲು  ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಪ್ರಯತ್ನಿಸುತ್ತಿರುತ್ತಾರೆ .ಇಂತಹ ಪ್ರಯತ್ನದಿಂದ  ಲೈಂಗಿಕ ಹಲ್ಲೆಗೆ ಒಳಗಾದ ಮಹಿಳೆಯರ ಹಾಗು ಅವರ ಕುಟುಂಬದವರ ಮೇಲೆ ಬೀರುವ ಆಘಾತದ ಬಗ್ಗೆ  “ದಿ ನ್ಯೂಸ್ ಮಿನಿಟ್” ಮತ್ತು “ಬಿಸಿನೆಸ್ ಸ್ಟ್ಯಾಂಡರ್ಡ್” ಬರೆದಿರುತ್ತಾರೆ . ಹೀಗೆ ಗುರುತಿಸಲ್ಪಟ್ಟ ಹೆಂಗಸರು , ಸೋಶಿಯಲ್ ಮೀಡಿಯಾ ಮೆಸೇಜ್ಗಳ ಮೂಲಕ ಅಥವಾ ದೂರವಾಣಿ ಕರೆಗಳ ಮೂಲಕ ಕಿರುಕುಳ ಅನುಭವಿಸುತ್ತಿದ್ದಾರೆ . ಇವರಲ್ಲಿ ಕೆಲ ಮಹಿಳೆಯರಿಗೆ ಪ್ರಜ್ವಲ್ ರೇವಣ್ಣ ಲೈಂಗಿಕ ಹಲ್ಲೆಯನ್ನು ರೆಕಾರ್ಡ್ ಮಾಡಿರುವುದರ ಅರಿವಿರಲಿಲ್ಲ. ಇನ್ನಷ್ಟು ಮಹಿಳೆಯರಿಗೆ ಹೆದರಿಸಿ ಬೆದರಿಸಿ ಅವರ ಬಾಯಿ ಮುಚ್ಚಿಸಲಾಗಿದೆ ಎಂಬ ಆರೋಪಗಳಿವೆ. ಕೆಲವು ಮಹಿಳೆಯರು ಹಾಗೂ ಅವರ ಕುಟುಂಬದವರು ಮನೆ ಮಠ ತೊರೆದು ಅಜ್ಞಾತ ವಾಸದ ಮೊರೆ ಹೋಗಿದ್ದಾರೆ. ಕೆಲವರು ಆತ್ಮಹತ್ಯೆಯ ಬಗ್ಗೆಯೂ ಆಲೋಚನೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಕೆಲ ಮಹಿಳೆಯರು ಸಾಮಾಜಿಕ ಬಹಿಷ್ಕಾರ, ನೊಂದವರ-ನಿಂದನೆ, ನಿಷ್ಕರುಣೆಯ ಅವಮಾನ , ಚಾರಿತ್ರ್ಯವಧೆ, ವೃತ್ತಿಪರ ಜೀವನದಲ್ಲಿ ಅಡ್ಡಗೋಲು , ದುರುದ್ದೇಶಪೂರಿತ ಪ್ರಶ್ನೆಗಳು, ಹೀಯಾಳಿಕೆ ಹೀಗೆ ನಾನಾ ರೀತಿಯ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ.

ಕಿರುಕುಳದ ಹಾದಿ

IBSA (image-based sexual abuse : ಚಿತ್ರಾಧಾರಿತ ಲೈಂಗಿಕ ಕಿರುಕುಳ)  ಇಂದ ಆಗುವ ಲೈಂಗಿಕ ಕಿರುಕುಳದ ಪರಿಯೇ  ಈ “ಪೆನ್ ಡ್ರೈವ್ “ ಕೇಸಿನಲ್ಲೂ ಆಗಿರುವುದು ಕಂಡು ಬರುತ್ತಿದೆ .  ಈ ಸಂಬಂಧದಲ್ಲಿ “ರಿವೆಂಜ್ ಪೋರ್ನ್” ಎಂಬ ಪದವನ್ನು  ಸಾಮಾನ್ಯವಾಗಿ ಉಪಯೋಗಿಸುತ್ತಾರೆ . ಇದು ಒಂದು ಅಪಪ್ರಯೋಗ .  ಇದರ ಅರ್ಥ  ಸೇಡಿನ ಉದ್ದೇಶದಿಂದ , ಚಿತ್ರದಲ್ಲಿ ಇರುವ ವ್ಯಕ್ತಿ  ಅಥವಾ ವ್ಯಕ್ತಿಗಳ ಅನುಮತಿ ಇಲ್ಲದೆ, ಸಂಭೋಗ ಅಥವಾ ಇನ್ಯಾವುದೇ ರೀತಿಯ ಲೈಂಗಿಕ ವಿಚಾರಕ್ಕೆ  ಸಂಬಂಧಿಸಿ  ಮಾಡಲ್ಪಟ್ಟ ಚಿತ್ರಗಳು . “ ರಿವೆಂಜ್ ಪೋರ್ನ್ “ ಅನ್ನುವ ಪದದ ಉಪಯೋಗವೇ ತಪ್ಪು ಹಾಗು ಹಾನಿಕಾರಕ. ಕೆಲವು ಮಾಧ್ಯಮದವರು ಈ ಕೇಸನ್ನು ‘ಲೈಂಗಿಕ ಹಗರಣ ‘ , ‘ಅಶ್ಲೀಲ ವಿಡಿಯೋಗಳು’ ಅಥವಾ  ‘ಸರಸದ ಚಿತ್ರಗಳು’ ಎಂದು ತಪ್ಪಾಗಿ ಹಾಗು ಲಘುವಾಗಿ ಉಲ್ಲೇಖಿಸುತ್ತಿದ್ದು ಅದರಿಂದ ಆಗಿರುವ ಲೈಂಗಿಕ ಕಿರುಕುಳ ಹಾಗು ಹಲ್ಲೆ ಮತ್ತು ಬಲಾತ್ಕಾರದ ಗಾಂಭೀರ್ಯವನ್ನು ಕಡಿಮೆ ಮಾಡುತ್ತಿದ್ದಾರೆ .

ನಗ್ನತೆ, ಅರೆ ನಗ್ನತೆ ಅಥವಾ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸೆರೆಹಿಡಿಯಲು , ಪ್ರಕಟಿಸಲು ,ಹಂಚಲು, ನಾಲ್ಕು ರೀತಿಯಒಪ್ಪಿಗೆಗಳ ಅಗತ್ಯವಿದೆ: 

೧. ಲೈಂಗಿಕ ಕ್ರಿಯೆ ಅಥವಾ ನಗ್ನತೆ ಅಥವಾ ಅರೆ ನಗ್ನತೆಗೆ ಒಪ್ಪುಗೆ ಇರಬೇಕು 

೨. ಚಿತ್ರದಲ್ಲಿ ಕಾಣಿಸುವ ವ್ಯಕ್ತಿಯು (ಅಥವಾ ವ್ಯಕ್ತಿಗಳು) ಅವರೇ ತಮ್ಮ ಚಿತ್ರವನ್ನು ಸೆರೆಹಿಡಿಯುವುದು . ಅಥವಾ ಇನ್ನೊಬ್ಬರಿಗೆ ತಮ್ಮ ಚಿತ್ರ ಸೆರೆಹಿಡಿಯಲು ಒಪ್ಪಿಗೆ ಕೊಡುವುದು. ಅವರು ತಮ್ಮ ಮುಖ , ತಮ್ಮನ್ನು ಗುರುತಿಸಲು ಮಾಡಬಹುದಾದ ದೇಹದ ಮೇಲೆ ಇರಬಹುದಾದ ಮಚ್ಚೆ ಅಥವಾ ಇನ್ನಿತರ ಕುರುಹುಗಳು ಅಥವಾ  ಹಚ್ಛೆಗಳನ್ನು ಮುಸುಕು ಹಾಕಲು ಅಥವಾ ಚಿತ್ರದಿಂದ ತೆಗೆದುಹಾಕುವ ಆಯ್ಕೆ ಮಾಡಬಹುದು 

೩. ಚಿತ್ರದಲ್ಲಿ ಕಾಣಿಸುವ ವ್ಯಕ್ತಿಯು (ಅಥವಾ  ವ್ಯಕ್ತಿಗಳು) ಒಮ್ಮತದ ಒಪ್ಪುಗೆಯಿಂದ ಚಿತ್ರ ಅಥವಾ ಭಾವಚಿತ್ರವನ್ನು ಒಂದು ಅಥವಾ ಹಲವು ಜನರಿಗೆ ಕಳುಹಿಸುವುದು. (ನಿಕಟ ಸಂಗಾತಿಗೆ ಅಥವಾ “Only Fans” ರೀತಿಯ ಜಾಲತಾಣಗಳ ಕ್ಲೈಯಂಟ್‍ಗಳಿಗೆ) . ಇನ್ಯಾವುದೇ ಬೇರೆ ವ್ಯಕ್ತಿಗೆ ಚಿತ್ರಗಳನ್ನು ಹಂಚಲು ಒಪ್ಪುಗೆ ನಿರಾಕರಿಸುವುದು .

೪. ಚಿತ್ರದಲ್ಲಿ ಕಾಣಿಸುವ ವ್ಯಕ್ತಿಯು (ಅಥವಾ ವ್ಯಕ್ತಿಗಳು) ತಮ್ಮ ಚಿತ್ರ ಅಥವಾ ಭಾವಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವುದು. ಸಾಮಾನ್ಯವಾಗಿ ಈ ವ್ಯಕ್ತಿ್ಗಳು ಪ್ರದರ್ಶನಕಾರಿಗಳು, ಹವ್ಯಾಸಿ ಅಥವಾ ವೃತ್ತಿಪರ ಪೋರ್ನ್ ನಟರಾಗಿರುತ್ತಾರೆ.

ಒಪ್ಪುಗೆ ಇಲ್ಲದೆ ಸೂಕ್ಷ್ಮ ಸಂದರ್ಭಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಪ್ರಸಂಗ ಎಷ್ಟೋ ಜಾಗಗಳಲ್ಲಿ ಅಥವಾ ಸಂದರ್ಭಗಳಲ್ಲಿ ಆಗಬಹುದು . ಹೋಟೆಲ್ , ಸ್ಪಾ , ಬಟ್ಟೆ ಬದಲಾಯಿಸುವ ಕೊಠಡಿಗಳಲ್ಲಿ , ಶೌಚಾಲಯಗಳಲ್ಲಿ ಅಡಗಿಸಿ ಇಟ್ಟಿರಬಹುದಾದ ಕ್ಯಾಮೆರಾಗಳು ಏಕಾಂತದ ನಿರೀಕ್ಷಣಾ ತಾಣಗಳಲ್ಲಿ ಇರುವ ಸಂದರ್ಭದಲ್ಲಿ ವ್ಯಕ್ತಿಯ ಚಿತ್ರಗಳನ್ನು ಸೆರೆಹಿಡಿಯಬಹುದು . ಅನೈತಿಕವಾಗಿ ಒಬ್ಬ ವ್ಯಕ್ತಿಯ  ಫೋನ್ ಅಥವಾ ಅಕೌಂಟ್ ಇಂದ ಸೂಕ್ಷ್ಮವಾದ ಫೋಟೋ ಅಥವಾ ವಿಡಿಯೋಗಳನ್ನು ತೆಗೆದುಕೊಳ್ಳಬಹುದು . ನಂತರ ಈ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಳ್ಳಬಹುದು , ಅಥವಾ ಈ ಚಿತ್ರಗಳು ಬಳಕೆಯಾಗಿ ಬೆದರಿಕೆಯಿಂದ ಹಣ ಸುಲಿಗೆಗೆ ಒಳಗಾಗಬಹುದು. ಅಥವಾ ಈ ವ್ಯಕ್ತಿಯ ಚಾರಿತ್ರ್ಯವಧೆ ಆಗುವಂತೆ ಇನ್ನೊಬ್ಬರಿಗೆ ಈ ಚಿತ್ರಗಳು ಹಂಚಲ್ಪಡಬಹುದು . 

ಈ ತರಹದ ನಾನಾ ರೀತಿಯಲ್ಲಿ ಚಿತ್ರಾಧಾರಿತ ಲೈಂಗಿಕ ಕಿರುಕುಳ (IBSA) ಆಗಬಹುದು . 

ಮತ್ತಷ್ಟು ಮಾಹಿತಿಗಾಗಿ ಈ ಲೇಖನ ಓದಬಹುದು  “Non-consensual intimate imagery: an Overview” . ಈ ಲೇಖನದಲ್ಲಿ IBSA ಸಂಬಂಧಿಸಿದ ವಿಚಾರಗಳು , ಅಪರಾಧಿಗಳ ಪ್ರೇರಣೆಗಳು ; ಲೈಂಗಿಕ ಹಲ್ಲೆಗೆ ಒಳಗಾದ ವ್ಯಕ್ತಿಯ ಮೇಲೆ ಬೀರಿದ  ಪರಿಣಾಮಗಳು ; ಸಮಾಜದ ಸರಿ ತಪ್ಪುಗಳು ಹಾಗು ಸಂತ್ರಸ್ತ ವ್ಯಕ್ತಿಯೇ ತಪ್ಪು ಎಸಗಿರುವ ಹಾಗೆ ನೋಡುವ ಇತರರು;  ಇವೆಲ್ಲ ವಿಚಾರಗಳು ಹೇಗೆ  ಒಂದಕ್ಕೊಂದು ಹೆಣೆದುಕೊಂಡತಿರುತ್ತವೆ ಎಂದು;  ಹಾಗು ನ್ಯಾಯ ಪಡೆಯಲು ಬರಬಹುದಾದ ಅಡ್ಡಗೋಡೆಗಳು .  ಈ ವಿಷಯದಲ್ಲಿ ಕಾನೂನಿನಲ್ಲಿರಿವ ನ್ಯೂನತೆಗಳು , ಕಾನೂನಿನ  ಮಿತಿಗಳ ಬಗ್ಗೆ ಚರ್ಚಿಸುತ್ತದೆ . ಈ ಚಿತ್ರಗಳ ಹರಡುವಿಕೆಯನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನ ಹಾಗು ಸಂಪನ್ಮೂಲಗಳು ಬಗ್ಗೆ ಮಾತಾಡುತ್ತದೆ . ) 

ಮುಖ್ಯವಾದ ಪ್ರೇರಣೆಗಳು 

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ಇಲ್ಲಿವರೆಗೂ ಕಡೆಗಣಿಸಲಾಗಿರುವ ಒಂದು ಮುಖ್ಯವಾದ ವಿಷಯವನ್ನು ಹೊರ ತಂದಿದೆ . ಮಾಧ್ಯಮದವರು , ಪೊಲೀಸ್ , ನ್ಯಾಯಾಂಗ ಹಾಗು ನಾಗರಿಕ ಸಮಾಜದವರು IBSAಗೆ ಸಂಬಂಧ ಪಟ್ಟ  ಘಟನೆಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಿದ್ಧರಾಗಿಲ್ಲ . ಲೈಂಗಿಕ  ಹಲ್ಲೆಗೆ ಒಳಗಾದ ವ್ಯಕ್ತಿಗೆ ಸೂಕ್ತವಾದ ರಕ್ಷಣೆಗಳು , ತ್ವರಿತ ನ್ಯಾಯ , ಮತ್ತೆ ಇನ್ನೂ ಹೆಚ್ಚು ಹಿಂಸೆ ಮತ್ತು ಕಿರುಕುಳಗಳು ಆಗದ ಹಾಗೆ ನೋಡಿಕೊಳ್ಳುವುದು , ಈ ಎಲ್ಲ ವಿಷಯದಲ್ಲೂ ಈಗಿರುವ ವ್ಯವಸ್ಥೆಗಳು  ಅಸಾಮರ್ಥ್ಯ ಅನ್ನಿಸಿಕೊಂಡಿವೆ .  ISBA ಘಟನೆ ಆದಕೂಡಲೇ ಅಥವಾ ಆಗಬಹುದಾದ ಸಂದರ್ಭ ನಿರ್ಮಾಣವಾಗುತ್ತಿದೆ ಎಂದಾಕ್ಷಣ ತ್ವರಿತವಾಗಿ  ಹಲ್ಲೆಗೆ ಒಳಗಾಗಿರುವ ವ್ಯಕ್ತಿಯ ರಕ್ಷಣೆ ಈ ಕಾರಣಗಳಿಗಾಗಿ ಮಾಡಬೇಕಾಗುತ್ತದೆ.

೧. ಚಿತ್ರಗಳು ಶಾಶ್ವತವಾಗಿ  ಪರಿಚಲನೆಯಲ್ಲಿತ್ತವೆ 

ಒಂದು ಬಾರಿ IBSA ವಿಷಯವು ‘online‘ (ಅಂತರ್ಜಾಲ, ವಾಟ್ಸಪ್ಪ್ , ಟೆಲಿಗ್ರಾಮ್ )  ಅಥವಾ ‘offline‘ ( ಪೆನ್ ಡ್ರೈವ್, CD, ಪ್ರಿಂಟ್ ಆಗಿರುವ ಫೋಟೋಗಳು )  ರೀತಿಯಲ್ಲಿ ಪರಿಚನೆಲೆಯು ಶುರುವಾಯಿತು ಅಂದರೆ , ಅವು ಕಾಡ್ಗಿಚ್ಚಿನ ರೀತಿಯಲ್ಲಿ ಲಂಗು ಲಗಾಮಿಲ್ಲದೆ ಹಬ್ಬುತ್ತವೆ . ಪರಿಚಲನೆಯಿಂದ ಅವನ್ನು ಶಾಶ್ವತವಾಗಿ ಹೊರತೆರೆಯಲು ಬಹಳ ಕಷ್ಟದ ಕೆಲಸವಾಗಿಹೋಗುತ್ತದೆ . ಬೇರೆ ಬೇರೆ ಆಯಾಮಗಳಿಂದ ಒಬ್ಬರು ಮತ್ತೊಬ್ಬರದೊಡನೆ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಈ ಕಾರಣದಿಂದ ಈ ಚಿತ್ರಗಳು ಶಾಶ್ವತವಾಗಿ ಪರಿಚಲನೆಯಲ್ಲಿ ಉಳುದುಕೊಂಡು ಬಿಡುತ್ತವೆ . ಈ ಪ್ರಕ್ರಿಯೆಗೆ “ಕೆಳಹಂತದ ವಿತರಣೆ “ ಅನ್ನುತ್ತಾರೆ . ಈ ಪರಿಚಲನೆ ಅಥವಾ ಹಂಚಿಕೆಯನ್ನು ನಿಲ್ಲಿಸುವುದು ಕೆಲವೇ ಗಂಟೆಗಳ ಬದಲು ಕೆಲವೇ ದಿನಗಳವರಗೆ ನಿದಾನವಾಯಿತೆಂದರೆ  , ಆ ಚಿತ್ರವನ್ನು ನೋಡಿರುವ ವ್ಯಕ್ತಿಗಳ ಸಂಖ್ಯೆ ನೂರರಿಂದ ಸುಮಾರು  ಹತ್ತಾರು ಲಕ್ಷದವರೆಗೂ ಬೆಳೆಯಬಹುದಾದ ಸಾಧ್ಯತೆಗಳಿರುತ್ತವೆ . ಆದ್ದರಿಂದ ಸಮಯೋಚಿತವಾಗಿ ತಡೆಗಟ್ಟುವುದು  ಬಹಳ ಮುಖ್ಯ . 

ಈ ರೀತಿಯ IBSA ವಿಷಯವು ಭಾರತದಲ್ಲಿ ಎಲ್ಲಡೆ ಆಗಾಗ್ಗೆ ಆಗುತ್ತಿದ್ದೂ ಒಂದು ಮಟ್ಟದಲ್ಲಿ ಲಾಭದಾಯಕವೂ ಆಗಿರುವ ವ್ಯವಹಾರವಾಗಿಹೋಗಿದೆ . ಈ ವ್ಯವಹಾರದಲ್ಲಿ ನುರಿತ ವಿತರಣಾ ವಿಧಾನಗಳು ಆಗಲೇ ಸ್ಥಾಪಿತಗೊಂಡಿವೆ . ಬೇಕಾದಷ್ಟು ವಿಡಿಯೋ ಹಾಗು ಚಿತ್ರಗಳು ಸರಬರಾಜು ಮಾಡುವ ವ್ಯವಸ್ಥೆಗಳು ಹುಟ್ಟಿಕೊಂಡಿವೆ . ಈ ರೀತಿಯ IBSA ವಿಷಯದ ಚಿತ್ರಗಳಿಂದ ಹಣಗಳಿಸುವ ನೂರಾರು ರೀತಿಯ ಪೋರ್ನ್ – ಸೈಟ್ಗಳು , ವಿಡಿಯೋ ಸೈಟ್ಗಳು , ಸಾಮಾಜಿಕ ಜಾಲತಾಣಗಳು ಸ್ಥಾಪಿತಗೊಂಡಿವೆ . ಈ ಚಿತ್ರಗಳನ್ನು ಉಪಯೋಗಿಸಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡುವ ವ್ಯವಸ್ಥೆಯೂ ಇದೆ . ಈ ರೀತಿ ಹಣ ಮಾಡುವುದು IBSA ಚಿತ್ರಗಳ ಪರಿಚಲನೆಗೆ ಮುಖ್ಯ ಪ್ರೇರಣೆಗಳು . 

೩. IBSA ಒಳಗಾದವರ ಮೇಲಿನ ಪರಿಣಾಮ ಗಂಭೀರ ಹಾಗು ನಿರಂತರ 

ಎಷ್ಟೋ ಸಂಶೋಧನೆಗಳು ಮತ್ತು ಲೌಕಿಕ ಜ್ಞಾನದ ಪ್ರಕಾರ ಹಲ್ಲೆಗೊಳಗಾದವರ ಮೇಲೆ ಆದ ಪರಿಣಾಮಗಳು ನಿರಂತರ ಗಂಭೀರ ಜೀವನವೇ  ಬದಲಾಗುವಂತಹ ದುರಾನುಭವವೇ ಸರಿ. ಈ ದುರಾನುಭವವು ಲೈಂಗಿಕ ಕಿರುಕುಳಕ್ಕೆ ಹಾಗು ಹಿಂಸೆಗೆ ಸಮಾನವಾಗಿ ಇರುತ್ತದೆ. ಇದರಿಂದಾಗಿ ಶಾಲೆ ಕಾಲೇಜಿನ ವಿದ್ಯಾಭ್ಯಾಸದಿಂದ  ಹೊರಹಾಕುವಿಕೆ, ಉದ್ಯೋಗ ನಷ್ಟ,  ಒಂಟಿತನ , ಕುಟುಂಬದಿಂದ ಸ್ನೇಹಿತರು ಹಾಗು ಸಂಗಾತಿಗಳು ದೂರವಾಗುವುದು್, ಇತ್ಯಾದಿ. ಎಷ್ಟೋ ಜನರು ಆತ್ಮಹತ್ಯೆಯ ಕಡೆಗೆ ಮನಸ್ಸು ಮಾಡುತ್ತಾರೆ . ಲೈಂಗಿಕ ಹಲ್ಲೆಯಾದವರು ಮೊದಲೇ ಹಿಂಸೆ ಅನುಭವಿರುತ್ತಾರೆ್, ಮತ್ತೆ ಈ ಚಿತ್ರಗಳ ಪರಿಚಲನೆಯಿಂದ  ಹಿಂಸೆಯ ಸುಳಿಯಲ್ಲಿ ಸಿಕ್ಕಿಬಿಡುತ್ತಾರೆ . ಆಘಾತದ ಮೇಲೆ ಆಘಾತ , ಹಿಂಸೆಯ ಮೇಲೆ ಹಿಂಸೆ . IBSA ಗೆ ಒಳಗಾದವರ ವಿಷಯವೂ ಮರುಹಿಂಸೆ ಹಾಗು ಮರುಹಲ್ಲೆಗೆ ಒಳಗಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಪ್ರಜ್ವಲ್ ರೇವಣ್ಣ ಇಂದ ಲೈಂಗಿಕ ಕಿರುಕುಳ ಅನುಭವಿಸಿರುವ ಕೆಲವರು ಮತ್ತೆ  ಲೈಂಗಿಕ ಹಿಂಸೆ ಹಲ್ಲೆಗೆ ತುತ್ತಾಗಿರುವ ವರದಿಗಳು ಬರುತ್ತಿವೆ . 

ಸೂಕ್ತ ಹಸ್ತಕ್ಷೇಪ

IBSA ಘಟನೆಗಳು ನಡೆದಾಗ, ಅಥವಾ ಬೆದರಿಕೆಗಳು ಕಂಡು ಬಂದಾಗ, ಸಂತ್ರಸ್ತರು ಕಂಗಾಲಾಗಿರುವ ಸಂದರ್ಭದಲ್ಲಿ ಅವರಿಗೆ ಭಾವನಾತ್ಮಕ, ತಾಂತ್ರಿಕ ಮತ್ತು ಕಾನೂನು ಬದ್ಧ ರೀತಿಯಲ್ಲಿ ಎಲ್ಲ ನೆರವನ್ನೂ ತ್ವರಿತ ಗತಿಯಲ್ಲಿ ನೀಡುವ ಅಗತ್ಯವಿದೆ. ಕೆಲವರಿಗೆ ದೈಹಿಕ ಅಥವಾ ತಾಂತ್ರಿಕ ರಕ್ಷಣೆಯ ಅವಶ್ಯಕತೆಯಿದೆ.  ಮತ್ತೆ ಕೆಲವರಿಗೆ ಈ ಪ್ರಕರಣದಿಂದ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದರಿಂದ ವೈದ್ಯಕೀಯ ನೆರವಿನ ಅವಶ್ಯಕತೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಮೇಜುಗಳನ್ನೂ ಹಾಗೂ ವಿಡಿಯೋಗಳನ್ನೂ ಆದಷ್ಟು ಬೇಗ ತೆಗೆದುಹಾಕುವ ಅಗತ್ಯವಿದೆ. ಇದರಿಂದ ಅವು ಮತ್ತೆ ಮತ್ತೆ ಹರಡುವುದನ್ನು ತಡೆಗಟ್ಟಬಹುದಾಗಿದೆ. 

ಪ್ರಜ್ವಲ್ ರೇವಣ್ಣ ವಿಡಿಯೋಗಳ ಪ್ರಕರಣದಲ್ಲಿ, Special Investigative Team (SIT) ತಂಡವು ಸಂತ್ರಸ್ತರಿಗೆ ಒಂದು ನಿರ್ದಿಷ್ಟ ಸಹಾಯವಾಣಿ (ಹೆಲ್ಪ್‌ಲೈನ್) ಅನ್ನು ಸೃಷ್ಟಿಸಿದ್ದಲ್ಲದೆ ಸಾರ್ವಜನಿಕರಿಗೆ ಈ ವಿಡಿಯೋಗಳನ್ನು ಸಂಗ್ರಹಿಸುವುದಾಗಲೀ, ಪರಿಚಲಿಸುವುದಾಗಲೀ (ಬೇರೆಯವರಿಗೆ ಕಳುಹಿಸುವುದಾಗಲೀ) ಮಾಡಿದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೊಟ್ಟಿದೆ. ಆದರೆ, ಕೆಳಹಂತದ ವಿತರಣೆಯ ಮಿತಿಯ ಪ್ರಕಾರ ಎಲ್ಲ ಆನ್‌ಲೈನ್ ಹಾಗೂ ಆಫ್‌ಲೈನ್ IBSA ಕಾಂಟೆಂಟ್ ಅನ್ನು  ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಿಲ್ಲ. ಒಂದು ವಾರ್ತಾವರದಿಯ ಪ್ರಕಾರ, SITಯು ವಿಡಿಯೋಗಳ ದೃಢೀಕರಣವನ್ನು, ಮೊದಲ ಬಾರಿಗೆ ಅವು ಎಲ್ಲಿಂದ ಅಪ್‌ಲೋಡ್ ಆಗಿದೆಯೋ ಅದರ ಐ.ಪಿ. ಅಡ್ರೆಸ್ಸನ್ನು ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಬಿತ್ತರವಾಯಿತೆಂದು ಪರಿಶೀಲಿಸಲೆಂದೇ  ಒಂದು ಉಪತಂಡವನ್ನು ಸೃಷ್ಟಿಸಿ್ದೆ. SITಯು ಹಾಸನದ ಹಲವೆಡೆ ದಾಳಿ ಮಾಡಿ ವಿಡಿಯೋದ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದೆ. ಜೊತೆಗೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸಾರ್ವಜನಿಕರಿಗೆ ಈ ವಿಡಿಯೋಗಳನ್ನು ಪರಿಚಲನೆ ಮಾಡುವುದನ್ನು ನಿಲ್ಲಿಸಬೇಕೆಂದೂ, ಇಲ್ಲವಾದಲ್ಲಿ ಕಾನೂನುಬದ್ಧ ಕ್ರಮಕ್ಕೆ ಗುರಿಯಾಗುವರೆಂದು ಸೂಚನೆ ನೀಡಿದೆ. 

ಸಂತ್ರಸ್ತರು ರಕ್ಷಣೆ ಮತ್ತು ನೆರವು ಪಡೆದುಕೊಳ್ಳಲು, ಸಾಕ್ಷ್ಯಾಧಾರಗಳನ್ನು ಒದಗಿಸಲು, ಅಥವಾ ದುರ್ಘಟನೆಗಳ ನಂತರದ ಪರಿಣಾಮಗಳನ್ನು ಎದುರಿಸಲು ಬೇಕಾದ ಸಹಾಯವನ್ನು ಕೇಳಲು ಒಂದು ಸಹಾಯವಾಣಿಯ ಅಗತ್ಯವಿದೆ. ಇದು ಕೇವಲ ಹೈ-ಪ್ರೊಫ಼ೈಲ್ ಕೇಸುಗಳಿಗೆ ಮಾತ್ರ ಸೀಮಿತವಾಗಿರಬಾರದು. ಉದಾಹರಣೆಗೆ, UK ಯಲ್ಲಿ, IBSA ನ ಸಂತ್ರಸ್ತರಿಗೆಂದೇ ಒಂದು ನಿರ್ದಿಷ್ಟ ಸಹಾಯವಾಣಿಯಿದೆ. ಅನೇಕ ದೇಶಗಳಲ್ಲಿ ಆನ್‌ಲೈನ್ ಹಿಂಸಾಚರಣೆಯನ್ನು ತಡೆಗಟ್ಟಲೆಂದೇ ಅನೇಕ ಸಹಾಯವಾಣಿಗಳೂ, ರಕ್ಷಣಾಕೇಂದ್ರಗಳೂ ಇವೆ. ಭಾರತದಲ್ಲೂ ಕೆಲವು NGO ಗಳು ಕೆಲವು ಸಹಾಯವಾಣಿಗಳನ್ನು ಒದಗಿಸಿವೆ. ಆದರೆ ಇವುಗಳಿಗೆ ಎಷ್ಟು ಪ್ರಕರಣಗಳು ವರದಿಯಾಗುವುವು, ಅವುಗಳು ಹೇಗೆ ಬಗೆಹರಿಯುವುವು ಎಂಬ ಮಾಹಿತಿಯು ಅಸ್ಪಷ್ಟ ಅಥವಾ ಲಭ್ಯವೇ ಇಲ್ಲವೆನ್ನುವಷ್ಟು ಕಡಿಮೆ. ಉದಾಹರಣೆಗೆ “ವನಿತಾ ಸಹಾಯವಾಣಿ” ಎಂಬ ಸಹಾಯವಾಣಿಯನ್ನು “ಪರಿಹಾರ್” ಎಂಬ ಸಂಸ್ಥೆಯು ಬೆಂಗಳೂರು ನಗರ ಪೋಲೀಸ್ ಸಹಯೋಗದೊಂದಿಗೆ ನಡೆಸುತ್ತಿದೆ. “ಪರಿಹಾರ್”ನ ವೆಬ್‌ಸೈಟಿನಲ್ಲಿ IBSA ವರದಿಗಳಾಗಲೀ, ಪ್ರಕರಣಗಳು ಬಗೆಹರಿದ ವಿಚಾರವಾಗಲೀ, ಅಂಕಿ ಅಂಶಗಳಾಗಲೀ, ಸ್ಪಷ್ಟವಾಗಿ ಇಲ್ಲವೇ ಇಲ್ಲ. 

ಕೆಳಹಂತದ ವಿತರಣೆಯ ತಡೆಗಟ್ಟುವಿಕೆ 

IBSA  ಘಟನೆಗಳಲ್ಲಿ, ಒಬ್ಬರೇ ಸಂತ್ರಸ್ತರಿರಲೀ, ಅಥವಾ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿರುವಂತೆ ಸಂತ್ರಸ್ತರ ಸಮೂಹವೇ ಇರಲಿ, ವ್ಯವಸ್ಥಿತ ಹಸ್ತಕ್ಷೇಪದ ಅವಶ್ಯಕತೆಯಿದೆ. ಇಲ್ಲಿ ವಿಡಿಯೋಗಳ ಸಂಖೆಯಾಗಲೀ, ಅವುಗಳ ಪರಿಚಲೆಯಾಗಲೀ, ಸಂತ್ರಸ್ತರ ಸಂಖ್ಯೆಯಾಗಲೀ ಎಲ್ಲವು ಅಧಿಕವಾಗಿಯೇ ಇದೆ. 

ನಿಂದನೆಗಳನ್ನು ವರದಿ ಮಾಡುವ ತಂತ್ರಜ್ಞಾನವು ಪ್ರಬಲವಾಗಿಲ್ಲದೇ ಇರುವುದು ಮತ್ತು ಅಧಿಕ ಸಂಕ್ಜ್ಯೆಯ ಇಮೇಜುಗಳೂ ವಿಡಿಯೋಗಳು ಇರುವಲ್ಲಿ ಸಮಯಾನುಸಾರ ಹಸ್ತಕ್ಷೇಪದ ಕೊರತೆ ಇರುವುದು ಕಂಡುಬಂದಿದೆ. ಕೆಲವು ಫೋರಮ್‌ಗಳು, ಪ್ರೋರ್ನ್ ವೆಬ್‌ಸೈಟ್‌ಗಳು, ಫೈಲ್ ಶೇರಿಂಗ್ ಸರ್ವೀಸ್‍ಗಳು, ಕ್ಲೌಡ್ ಸ್ಟೋರೇಜ್ ಸರ್ವೀಸ್‌ಗಳು ಇಂತಹ IBSA ವಿಷಯಗಳನ್ನೇ ಒಳಗೊಂಡಿರುವುದಾಗಿದೆ. ಇಂತಹ ಸರ್ವೀಸ್‌ಗಳನ್ನು ಸಂಪರ್ಕಿಸುವವರಿಂದ ಸಂತ್ರಸ್ತರಿಗೆ ಕೆಡುಕುಂಟಾಗುತ್ತದೆ. ಆ ಸ್ಥಳಗಳಿಂದ IBSA ವಿಷಯಗಳನ್ನು ತೆರವುಗೊಳಿಸಬೇಕಾಗಿದೆ. 

ಜೊತೆಗೆ, ಇಂತಹ ಸರ್ವೀಸ್‌ಗಳನ್ನು ಸಂಪರ್ಕಿಸಿದಾಗ, ಯಾವ ಸಂತ್ರಸ್ತರ ವಿಷಯಗಳನ್ನು ತೆರವುಗೊಳಿಸಬೇಕೋ ಆ ವಿಷಯಗಳಿಗೇ ಹೆಚ್ಚು ಒತ್ತುಕೊಡುವಂತೆ ನಡೆದುಕೊಳ್ಳುತ್ತಿವೆ. ಅಲ್ಲದೆ, ಸಂತ್ರಸ್ತರನ್ನು ಅನೇಕ ವಿಧದಲ್ಲಿ ಗುರಿಯಾಗಿಸಿಕೊಳ್ಳುತ್ತಲೂ ಇವೆ. ಉದಾಹರಣೆಗೆ ಸಂತ್ರಸ್ತರು ತಮ್ಮ ನಿಜ ಗುರುತುಗಳೊಂದಿಗೆ ಈಮೇಯ್ಲ್ ಮಾಡಿದರೆ , ಅವರಿಗೆ ಈಮೇಯ್ಲ್ ಅಡ್ರೆಸ್, ಹೆಸರು, ಇತ್ಯಾದಿ ಮಾಹಿತಿಗಳು ದೊರಕುತ್ತವೆ. ಒಂದು ವೇಳೆ ಅನ್ಯ ಹೆಸರು ಅಥವಾ ಈಮೇಯ್ಲ್ ಅಡ್ರೆಸ್ ಬಳಸಿದರೆ, ಸಂತ್ರಸ್ತರ IP ಅಡ್ರೆಸ್  (ಇಂಟರ್ನೆಟ್‌ಗೆ ಕನೆಕ್ಟ್ ಮಾಡಲಾದ ಪ್ರತಿಯೊಂದು ಉಪಕರಣಕ್ಕೂ ಇರುವ ಅಡ್ರೆಸ್‌ಗೆ IP ಅಡ್ರೆಸ್ ಎನ್ನುತ್ತಾರೆ) ಮತ್ತು ಅವರ ವಾಸ್ತವದ ಜಾಗವೂ ತಿಳಿದುಬರುತ್ತದೆ. ಈ ಮಾಹಿತಿಗಳನ್ನು ಹಾಗೂ ಚಿತ್ರಗಳನ್ನು ಬಳಸಿಕೊಂಡು ಸಂತ್ರಸ್ತರ ಬಗ್ಗೆ ಅವರ ವಿಳಾಸ, ಸಾಮಾಜಿಕ ಜಾಲತಾಣಗಳ ಅಕೌಂಟುಗಳು ಮತ್ತು  ಇತರ ಹಲವು ಮಾಹಿತಿಗಳನ್ನೂ ಪಡೆದುಕೊಳ್ಳಬಹುದು.

ವಿಷಯಗಳನ್ನು stopncii.org  ಗೆ ವರದಿ ಮಾಡುವುದು ಅಪ್‍ಲೋಡ್ / ಮರು-ಅಪ್‌ಲೋಡ್ ಮಾಡುವುದನ್ನು ತಡೆಗಟ್ಟುವ ವಿಧಾನಗಳಲ್ಲಿ ಪ್ರಧಾನವಾದದ್ದಾಗಿದೆ. ಈ ಸೇವೆಗಳು ಸಂಸ್ಥೆಗಳಾದ Facebook, TikTok, Reddit, Instagram, Bumble, Snap, Threads, OnlyFans, PornHub ಮತ್ತು Niantic ಗೆ ಅನ್ವಯಿಸುತ್ತದೆ. 

ಈ ಕೆಳಕಂಡ ವೇದಿಕೆಗಳಲ್ಲಿ IBSA  ವಿಷಯಗಳ ಬೇಡಿಕೆಗಳನ್ನು ಪರಿಹಾರ ಮಾಹಿತಿಗಳ ಮೂಲಕ ತೆಗೆದು ಹಾಕುವುದು: Facebook (Meta), Google, Microsoft, Tumblr, X (Twitter), Yahoo, 4Chan, About.me, Ask, AOL, Flickr, Lycos, MySpace ಮತ್ತು Snapchat. ಕೆಳಕಂಡ ಇತರ ವೇದಿಕೆಗಳಲ್ಲಿ ತೆಗೆದು ಹಾಕುವ ತಂತ್ರಜ್ಞಾನವು ಲಭ್ಯವಿದೆ: Reddit, PornHub, Imgur, Photobucket ಮತ್ತು Wikipedia. 

ಮತ್ತೊಂದು ಹಸ್ತಕ್ಷೇಪವು ಪ್ರತಿ ಸರ್ಚ್ ಇಂಜಿನ್ನಿಗೂ ಈ ಚಿತ್ರಗಳು ಮತ್ತು ವಿಡಿಯೋಗಳನ್ನು, ಮತ್ತು ಅವುಗಳು ಇರುವ URL ಗಳನ್ನು de-index ಮಾಡುವಂತೆ ಕೋರಿಕೆ ಸಲ್ಲಿಸುವುದು. De-index ಆಗಿರುವ ವಿಷಯಗಳು ಅಂತರ್ಜಾಲದಲ್ಲಿ ಇದ್ದರೂ ಸರ್ಚ್ ಮಾಡಿದಾಗ ದೊರಕುವುದಿಲ್ಲ. ಇದರಿಂದ ಇವು ಜನರಿಗೆ ತಲುಪುವುದು ನಿಧಾನವಾಗಿ ಹರಡುವಿಕೆಗೆ ಕಡಿಮೆ ಆಸ್ಪದವಿರುತ್ತದೆ. ಉದಾಹರಣೆಗೆ, Google Search ತನ್ನ Content and Product Policies ಅಡಿ ವಿಷಯವನ್ನು ತೆಗೆದುಹಾಕಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ. 

ಸಂತ್ರಸ್ತರಿಗೆ ತಾಂತ್ರಿಕ ನೆರವಿನ ಅಗತ್ಯವೂ ಇದೆ. ಇದರಿಂದ ಯಾವುದೇ ರೀತಿಯ ಆನ್‍ಲೈನ್ ಹಿಂಸೆಯನ್ನಾಗಲೀ, ಶೋಷಣೆಯನ್ನಾಗಲೀ, ನಿಂದನೆಯನ್ನಾಗಲೀ ತಡೆಗಟ್ಟಲು ಅನುಕೂಲವಾಗುವುದು. ಈ ಘಟನೆಯು ಸಂತ್ರಸ್ತರನ್ನು ದುರ್ಬಲಗೊಳಿಸಿ Digital Attack ಗೆ ಗುರಿ ಮಾಡಬಲ್ಲದು. IBSA ಸಂತ್ರಸ್ತರಿಗೆ ಉಂಟಾಗುವ Digital Attack ಗಳಲ್ಲಿ ಕೆಳಕಂಡವು ಸಾಮಾನ್ಯವಾದುವು: ಪಾಸ್‍ವರ್ಡ್‌ಗಳ ಕಳ್ಳತನ, ಈಮೇಯ್ಲ್ ಅಕೌಂಟುಗಳ, ಸಾಮಾಜಿಕ ಜಾಲತಾಣಗಳ ಹ್ಯಾಕಿಂಗ್, ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರೊಫೈಲುಗಳ ಬಳಕೆ ಮಾಡಿ ಅವರನ್ನು ವೇಶ್ಯೆಯರಂತೆ ಬಿಂಬಿಸುವುದು, ಅವರ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವುದು, ಅವರ ಚಿತ್ರಗಳನ್ನು, ವಿಡಿಯೋಗಳನ್ನು ಬೆತ್ತಲೆಯ ರೂಪದಲ್ಲಾಗಲೀ ಲೈಂಗಿಕ ಕ್ರಿಯೆಗಳಲ್ಲಿರುವಂತೆಯಾಗಲೀ ಅಂತರ್ಜಾಲದಲ್ಲಿ ಪೋಸ್ಟ್ ಮಾಡುವ ಸಾಧ್ಯತೆಗಳಿವೆ.

ಒಂದು ವೇಳೆ ಚಿತ್ರಗಳಾಗಲೀ ವಿಡಿಯೋಗಳಾಗಲೀ ಸಂತ್ರಸ್ತರ ಉಪಕರಣಗಳಿಂದಲೋ ಅಥವಾ ಅವರ ಪರಿಚಿತರಿಂದಲೋ ಕಳ್ಳತನ ಮಾಡಿದ್ದಾದರೆ ಅದನ್ನು ಪುನರಾವರ್ತಿಸುವುದನ್ನು ತಡೆಗಟ್ಟಬೇಕಿದೆ. ನುರಿತ ಡಿಜಿಟಲ್ ಸೆಕ್ಯೂರಿಟಿ ತಜ್ಞರ ವಿಶ್ಲೇಶಣೆಯಿಂದ ಸಂತ್ರಸ್ತರಿಗೆ ನೆರವು ದೊರಕುತ್ತದೆ. ವಿಶ್ಲೇಶಣೆ ಮತ್ತು ತದನಂತರದ ಚಟುವಟಿಕೆಗಳು ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. 

ಸರ್ಕಾರದ ಏಜೆನ್ಸಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ IBSA ಪ್ರಕರಣಗಳು ಅಧಿಕವಾಗಿದ್ದು ಅಲ್ಲಿ ಒಮ್ಮತವಿಲ್ಲದ ಅಥವಾ ಅತಿ ವೈಯಕ್ತಿಕ ಎನ್ನುವ ಚಿತ್ರಗಳನ್ನು ಬಿತ್ತರಿಸದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಪ್ರದರ್ಶಿಸಲಾಗಿದೆ. 

ಎಲ್ಲ ಹಸ್ತಕ್ಷೇಪಗಳಲ್ಲಿಯೂ ಎಲ್ಲ ಸಂತ್ರಸ್ತರ ದ್ವನಿಯನ್ನೂ, ಅನುಭವಗಳನ್ನೂ, ಮತ್ತು ಅವಶ್ಯಕತೆಗಳನ್ನೂ ಕೇಂದ್ರವಾಗಿರಿಸುವ ಅಗತ್ಯವಿದ್ದು, ಅವರ ಘನತೆ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುವುದು ಅತ್ಯಗತ್ಯವಿದೆ. 


Leave a Reply

Your email address will not be published. Required fields are marked *